ಮುಸ್ಲಿಂ ವ್ಯಕ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಿಕ್ಕ ಕಾರಣ19 ಸದಸ್ಯರ ರಾಜೀನಾಮೆ!

 


ಸಿಂಧನೂರು: ಸಿಂಧನೂರು ತಾಲ್ಲೂಕಿನ ಆರ್.ಎಚ್.ನಂ-1 ಕ್ಯಾಂಪ್ ಗ್ರಾ.ಪಂ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್ ಬೆಂಬಲಿತ, ಮುಸ್ಲಿಂ ಸಮುದಾಯದವರಾದ ಎ. ರಹಮದ್ ಪಾಷಾ ಅಧ್ಯಕ್ಷರಾಗಿರುವುದನ್ನು ವಿರೋಧಿಸಿ 19 ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಗ್ರಾ.ಪಂನಲ್ಲಿ ಒಟ್ಟು 38 ಸದಸ್ಯರಿದ್ದಾರೆ. ಆ ಪೈಕಿ 19 ಸದಸ್ಯರು ಆಯ್ಕೆ ವಿರೋಧಿಸಿ ರಾಜೀನಾಮೆ ನೀಡಲು ಗ್ರಾ.ಪಂ ಕಚೇರಿಗೆ ಶುಕ್ರವಾರ ಬಂದಿದ್ದರು. ಅಧ್ಯಕ್ಷರು ಇಲ್ಲದಿರುವುದರಿಂದ ಪಂಚಾಯಿತಿಯ ಆವಕ-ಜಾವಕ ಶಾಖೆಯಲ್ಲಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಿಂದ ಈ 19 ಸದಸ್ಯರೂ ದೂರ ಉಳಿದಿದ್ದರು.

ಭಾನುವಾರ ಹೇಳಿಕೆ ನೀಡಿರುವ ಅವರು ಗ್ರಾಮ ಪಂಚಾಯಿತಿ ಎರಡನೆಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮೀಸಲಾತಿ ನೀಡಿದಂತೆ ಆರ್.ಎಚ್.ಕ್ಯಾಂಪ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಲ್ಲಿಯ ಸದಸ್ಯರ ಪ್ರೀತಿ ಒತ್ತಡಕ್ಕೆ ಮಣಿದು ರಹಮದ್ ಪಾಷ ವಿಜೇತರಾಗಿದ್ದಾರೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಫ್ರೀ ಗ್ಯಾಸ್ ಉಜ್ವಲ ಯೋಜನೆ ಮತ್ತೆ ಅರ್ಜಿ ಸಲ್ಲಿಕೆ ಆರಂಭ.!

PM ಮೋದಿಯವರು ಚೆಸ್ ಮಾಂತ್ರಿಕ ಪ್ರಗ್ನಾನಂದ ಅವರನ್ನು ಭೇಟಿಯಾಗಿದ್ದಾರೆ.!

ಭಾರತೀಯ ಅಂಚೆ ಇಲಾಖೆ (India Post) (GDS) ಜಿ ಡಿ ಎಸ್ ಮೆರಿಟ್ ಲೀಸ್ಟ್ ಬಿಡುಗಡೆ ಮಾಡಲಾಗಿದೆ, ಈಗಲೇ ಚೆಕ್ ಮಾಡಿ.!