ಕಾರವಾರದ ಅರಬ್ಬಿ ಸಮುದ್ರದಲ್ಲಿ ಅತೀ ಉದ್ದದ ಬಂಗಡೆ ಮೀನು ಪತ್ತೆ.!

ಕಾರವಾರ : ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗಡೆಗಳಲ್ಲೆ ಅತಿ ದೊಡ್ಡದಾದ ಹಾಗೂ ಉದ್ದವಾದ, ಬಂಗಡೆ ಮೀನು ಕಾರವಾರದ ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಸಿಕ್ಕಿದೆ, ಇದು ಕರಾವಳಿ ಭಾಗದಲ್ಲಿ ಕುತೂಹಲ ಮೂಡಿಸಿದೆ.

Pic : Biggest fish found in Karwar


ಕಾರವಾರದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ ಎಂ.ಐ. ಇಂಜಿನ್ ಹೊಂದಿದ ಖಾಕಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ಒಂದು ದೊಡ್ಡ ಗಾತ್ರದ ಬಂಗಡೆ ಮೀನು ದೊರೆತಿದೆ, ಇದು ಮೀನುಗಾರರ ಅಚ್ಚರಿಗೆ ಕಾರಣವಾಗಿದೆ. ಆನಂದು ರಾಮ ಹರಿಕಂತ್ರ ಅವರಿಂದ ಈ ಬಂಗಡೆ ಮೀನನ್ನು ಪಡೆದುಕೊಂಡ ನಹೀನ ಹರಿಕಂತ್ರ ಎನ್ನುವವರು ಈ ಬಂಗಡೆ ಮೀನುಗಾರರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ.

ಸಮುದ್ರದಲ್ಲಿ ಸಿಕ್ಕ ಬಂಗುಡೆ ಮೀನು ಸುಮಾರು 48 ಸೆ.ಮೀ, ಉದ್ದ, ಸುಮಾರು 12 ಸೆ.ಮೀ. ಅಗಲವಿದೆ. ಭಾರತದಲ್ಲಿ ಇದುವರೆಗೆ ದೊರೆತ ಅತಿ ದೊಡ್ಡ ಬಂಗುಡೆ ಜಾತಿಯ ಮೀನು ಇದಾಗಿದೆ. ಈ ಹಿಂದೆ ಸಿಕ್ಕ ಬಂಗುಡೆ ಮೀನು ಸುಮಾರು ಗಂಡು ಬಲಗಡೆ 36 ಸೆ.ಮೀ ಉದ್ದ ಹಾಗೂ ಹೆಣ್ಣು ಬಂಗಡೆ 42 ಸೆ.ಮೀ. ಉದ್ದವಿದೆ ಎಂದು ಕಡಲ, ಜೀವ ಶಾಸ್ತ್ರದ ಶಿವಕುಮಾರ ಹರಗಿ ಮಾಹಿತಿ ನೀಡಿದ್ದಾರೆ. ಆದರೆ ಕಾರವಾರದಲ್ಲಿ ಸಿಕ್ಕ ಮೀನು ಇದಕ್ಕಿಂತ ದೊಡ್ಡದಾಗಿದೆ.

ಈ ಮೀನನ್ನು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸಂರಕ್ಷಣೆ ಮಾಡಲಾಗಿದ್ದು. ಮತ್ತು ಈ ಬಗ್ಗೆ ಮಾಹಿತಿ ನೀಡಿರುವ ಶಿವಕುಮಾರ ಹರಗಿ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ವೀಕ್ಷಣೆಗೆ, ಅಧ್ಯಯನಕ್ಕೆ ಅನುಕೂಲವಾಗುವಂತೆ ಫಾರ್ಮಾಲಿನ ಹಾಕಿ ಈ ಬಂಗುಡೆ ಮೀನನ್ನು ಸಂರಕ್ಷಿಸಿ ಇಡಲಾಗುವುದು ಎಂದು ತಿಳಿಸಿದ್ದಾರೆ.


Important Note : This information taken from one of the big media , which means it's not a falls information.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಿಶ್ವದ ಶ್ರೀಮಂತ ಮಹಿಳೆಯನ್ನು ಭೇಟಿ ಮಾಡಿ, ಇವರು ಭಾರತೀಯರಲ್ಲ, ಮಸ್ಕ್ ಗೆ ಯಾವುದೇ ಹೊಂದಾಣಿಕೆ ಇಲ್ಲ, ಮುಕೆಶ್ ಅಂಬಾನಿ, ರತನ್ ಟಾಟಾ, ಅದಾನಿ, ನಿವ್ವಳ ಮೌಲ್ಯ..!

ತೋಟಗಾರಿಕಾ ಇಲಾಖೆಯಲ್ಲಿ 4319 ಬ್ರಹತ್ ನೇಮಕಾತಿ 2023. KSHD Recruitment 2023

ಅಯೋಧ್ಯೆಯ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ! ಆಲಿಗಢ ವ್ಯಕ್ತಿಯಿಂದ 400 ಕೆಜಿ ಭಾರದ ಬೀಗ ತಯಾರಿ !