ಬೆಂಗಳೂರಿನಲ್ಲಿ ಬಾಲಕಿಯ ಮೇಲೆ 65 ವರ್ಷದ ಪ್ರಾಂಶುಪಾಲನಿಂದ ರೇಪ್‌. ಅಮಾನುಷ ಕೃತ್ಯ ಬೆಳಕಿಗೆ;

ಬೆಂಗಳೂರು :  ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲನೇ ಅತ್ಯಾಚಾರ ಮಾಡಿರುವ ಅಮಾನುಷ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಗುಂಜೂರಿನ ಶಾಲೆಯೊಂದರಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ವರ್ತೂರು ಪೊಲೀಸ್‌ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ, ಖಾಸಗಿ ಶಾಲೆಯ ಪ್ರಾಂಶುಪಾಲ ಲ್ಯಾಂಬರ್ಟ್‌ ಪುಷ್ಪರಾಜ್‌ನನ್ನು (65) ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಜೂರಿನ ಶಾಲೆಯ ಒಂದರಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ವರ್ತೂರು ಪೊಲೀಸ್‌ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ, ಖಾಸಗಿ ಶಾಲೆಯ ಪ್ರಾಂಶುಪಾಲ ಲ್ಯಾಂಬರ್ಟ್‌ ಪುಷ್ಪರಾಜ್‌ನನ್ನು ಬಂಧಿಸಿದ್ದಾರೆ. 

ಈ ಶಾಲೆಯಲ್ಲಿ 10 ವರ್ಷದ ಬಾಲಕಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಎಂದಿನಂತೆ ಗುರುವಾರ ಬೆಳಗ್ಗೆ 8.30ಕ್ಕೆ ಶಾಲೆಗೆ ತೆರಳಿದ್ದಳು. ಬೆಳಗ್ಗೆ 11.30ರ ಸುಮಾರಿಗೆ ಪ್ರಾಂಶುಪಾಲ ಲ್ಯಾಂಬರ್ಚ್‌ ಪುಷ್ಪರಾಜ್‌, ಈ ಬಾಲಕಿಯನ್ನು ಪುಸಲಾಯಿಸಿ ಶಾಲೆಯ ಖಾಲಿ ಕೊಠಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಿನ್ನಲು ಕೇಕ್‌ ಕೊಟ್ಟು ಕಳುಹಿಸಿದ್ದಾನೆ.

ಬಾಲಕಿಗೆ ಡಿಸ್ಲೆಕ್ಸಿಯಾ ಸಮಸ್ಯೆ:

ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ‘ಡಿಸ್ಲೆಕ್ಸಿಯಾ’ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕಾಯಿಲೆಗೆ ತುತ್ತಾದವರು ಓದುವುದು, ವಾಕ್ಯಗಳನ್ನು ಅರ್ಥೈಸಿಕೊಳ್ಳುವುದು, ಪದಗಳು ಹಾಗೂ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಬಾಲಕಿ ಶಾಲಾ ಕಲಿಕೆಯಲ್ಲಿ ಹಿಂದುಳಿದಿದ್ದಳು. ಈ ಕಾರಣದಿಂದ ಆಕೆಯ ಪೋಷಕರು 10 ವರ್ಷದ ಮಗಳನ್ನು 2ನೇ ತರಗತಿಯಲ್ಲೇ ಓದಿಸುತ್ತಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಫ್ರೀ ಗ್ಯಾಸ್ ಉಜ್ವಲ ಯೋಜನೆ ಮತ್ತೆ ಅರ್ಜಿ ಸಲ್ಲಿಕೆ ಆರಂಭ.!

PM ಮೋದಿಯವರು ಚೆಸ್ ಮಾಂತ್ರಿಕ ಪ್ರಗ್ನಾನಂದ ಅವರನ್ನು ಭೇಟಿಯಾಗಿದ್ದಾರೆ.!

ಭಾರತೀಯ ಅಂಚೆ ಇಲಾಖೆ (India Post) (GDS) ಜಿ ಡಿ ಎಸ್ ಮೆರಿಟ್ ಲೀಸ್ಟ್ ಬಿಡುಗಡೆ ಮಾಡಲಾಗಿದೆ, ಈಗಲೇ ಚೆಕ್ ಮಾಡಿ.!