ಕುರಿ ಮಾಂಸದ ಬದಲು ದನದ ಮಾಂಸದ ಬಿರಿಯಾನಿ; ಮಟನ್ ತಿನ್ನುವವರೇ ಎಚ್ಚರ!

ಪ್ರವಾಸಿಗರಿಗೆ ಕುರಿ ಮಾಂಸದ ಬದಲಿಗೆ ದನದ ಮಾಂಸದ ಬಿರಿಯಾನಿ ನೀಡುತ್ತಿರುವ ಪ್ರಕರಣ ಮಲೆನಾಡಿನಲ್ಲಿ ಪೊಲೀಸರು ದಾಳಿ ಮಾಡಿ ಬಯಲಿಗೆಳೆದಿದ್ದಾರೆ, ಈ ಘಟನೆ ಚಿಕ್ಕಮಗಳೂರಿನ ಕೆಲವು ಹೋಟೆಲ್‌ಗಳಲ್ಲಿ ನಡೆದಿದೆ.


ಚಿಕ್ಕಮಗಳೂರು : ಕಾಫಿನಾಡು ನಾನ್ ವೆಜ್‍ಗೂ ( Non Veg ) ಕೂಡ ಫೇಮಸ್ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಒಂದು ಹೋಟೇಲ್ ಗಿಂತ ಮತ್ತೊಂದು ಹೋಟೇಲ್ ರುಚಿಕರ, ಶುಚಿಗೆ ಹೆಸರುವಾಸಿ, ಆದರೆ ಇದೀಗ ಪೊಲೀಸರ ದಾಳಿಯಿಂದ ಕೆಲ ಹೋಟೇಲ್ ನಿಜ ಬಣ್ಣ ಬಯಲಾಗಿದೆ. ಕುರಿ ಮಾಂಸದ ಬಿರಿಯಾನಿ ಬದಲು ಗೋ ಮಾಂಸದ ಬಿರಿಯಾನಿ ನೀಡಿ ಪೊಲೀಸರ ಅತಿಥಿ ಆಗಿದ್ದಾರೆ. 

ಚಿಕ್ಕಮಗಳೂರು ಕಾಫಿನಾಡು ಹೇಳಿಕೇಳಿ ಪ್ರವಾಸಿ ಜಿಲ್ಲೆ. ಪ್ರವಾಸೋದ್ಯಮದಿಂದಲೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ.ಆದರೆ ಪ್ರವಾಸಿಗರನ್ನ ಆಕರ್ಷಿಸೋದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್ಗಳಲ್ಲಿ ಕುರಿ ಮಾಂಸದ (ಮಟನ್) ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್ ಅಡುಗೆ ಮಾಡುತ್ತಿದ್ದಾರೆ. 

ಕುರಿ ಮಟನ್ ಕೆಜಿಗೆ 700-800 ರೂಪಾಯಿ ಇದೆ, ಅದೆ ದನದ ಮಟನ್ 200-300 ರೂಪಾಯಿಗೆ ಸಿಗುತ್ತೆ. ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆಗೆ ದನದ ಮಾಂಸ ಮಿಕ್ಸ್ ಮಾಡಿ ಅಡುಗೆ ಮಾಡಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರ ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ ಐದು ಕೆಜಿ ದನದ ಮಾಂಸ ಹಾಗೂ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ. ಇನ್ನು ಹೆಚ್ಚಿನ ಸುದ್ದಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ.

Facebook Link :

ThirdEye newz5 Facebook Link


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಿಶ್ವದ ಶ್ರೀಮಂತ ಮಹಿಳೆಯನ್ನು ಭೇಟಿ ಮಾಡಿ, ಇವರು ಭಾರತೀಯರಲ್ಲ, ಮಸ್ಕ್ ಗೆ ಯಾವುದೇ ಹೊಂದಾಣಿಕೆ ಇಲ್ಲ, ಮುಕೆಶ್ ಅಂಬಾನಿ, ರತನ್ ಟಾಟಾ, ಅದಾನಿ, ನಿವ್ವಳ ಮೌಲ್ಯ..!

ತೋಟಗಾರಿಕಾ ಇಲಾಖೆಯಲ್ಲಿ 4319 ಬ್ರಹತ್ ನೇಮಕಾತಿ 2023. KSHD Recruitment 2023

ಅಯೋಧ್ಯೆಯ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ! ಆಲಿಗಢ ವ್ಯಕ್ತಿಯಿಂದ 400 ಕೆಜಿ ಭಾರದ ಬೀಗ ತಯಾರಿ !