ಯುವ ರೈತನನ್ನು ಮದ್ವೆಯಾಗಲ್ಲ ಎಂದ ಯುವತಿ; ಟೊಮೆಟೊ ಮಾರಿದ ಹಣದಲ್ಲಿ ಕಾರು ಖರೀದಿಸಿ ಕನ್ಯೆ ನೋಡಲು ಹೋಗುತ್ತೇನೆ ಎಂದ ಕೃಷಿಕ .

 

Pic : Tv9 Kannada

ಚಾಮರಾಜನಗರ :  ರೈತನಿಗೆ ನಮ್ಮ ಮಗಳನ್ನು ಮದುವೆ ಮಾಡಿಕೊಡಲ್ಲ ಎಂಬ ಪೋಷಕರ ಮಾತು ಯಾವಾಗಲೂ ಕೇಳಿ ಬರುತ್ತಿರುವ ವಿಷಯ. ಈ ಮಾತುಗಳನ್ನೇ ಸವಾಲಾಗಿ ತೆಗೆದುಕೊಂಡ ಯುವ ಕೃಷಿಕ ತನ್ನ 12 ಎಕರೆ ಜಮೀನಿನಲ್ಲಿ ಟೊಮೆಟೊ ಎಂಬ ಬಂಗಾರ ಬೆಳೆದು ಕೋಟ್ಯಾಧಿಪತಿಯಾಗಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಕೃಷಿಕರಿಗೆ (Farmer) ನಮ್ಮ ಮಗಳನ್ನು ಮದುವೆ ಮಾಡಿಕೊಡಲ್ಲ ಎಂಬ ಪೋಷಕರ ಮಾತು ಹೇಳುತ್ತಿರುತ್ತಾರೆ. ನಾವು ಕೃಷಿಕನನ್ನು ಮದುವೆಯಾಗುವುದಿಲ್ಲ (Marriage) ಸರ್ಕಾರಿ ಕೆಲಸ ಅಥವಾ ಐಟಿ-ಬಿಟಿ ಉದ್ಯೋಗಸ್ಥನೇ ಬೇಕು ಎಂದು ಹುಡುಗಿಯರು ಹೇಳುತ್ತಿದ್ದಾರೆ. ಇದೇರೀತಿಯಾದ ಅನುಭವಗಳು ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರದ ಯುವ ರೈತ ರಾಜೇಂದ್ರ ಅವರಿಗೆ ಆಗಿದೆ. ಹೌದು ಯುವ ರೈತ ರಾಜೇಂದ್ರ ಈ ಹಿಂದೆ ಕನ್ಯೆ ನೋಡಲು ಹೋದಾಗ ರೈತನೆಂದು ಯುವತಿಯರು ಮದುವೆಯಾಗಲು ನಿರಾಕರಿಸಿದ್ದರು. ಸರ್ಕಾರಿ ಕೆಲಸ ಇದ್ದವರಿಗೆ ಮಾತ್ರ ನಮ್ಮ ಮಗಳನ್ನು ಕೊಡುವುದಾಗಿ ಪೋಷಕರು ಅವಮಾನಿಸಿದ್ದರು.

ಈ ಮಾತುಗಳನ್ನು ಕೇಳಿದ ಯುವ ರೈತ ರಾಜೇಂದ್ರ ನಾನು ಸರ್ಕಾರಿ ಉದ್ಯೋಗಿ ಮತ್ತು ಐಟಿ-ಬಿಟಿ ಉದ್ಯೋಗಸ್ಥರಿಗಿಂತ ಕೃಷಿಯಲ್ಲೇ ಹೆಚ್ಚು ಆದಾಯ ಗಳಿಸುತ್ತೇನೆಂದು ಪಣ ತೊಟ್ಟಿದ್ದರು. ಲಕ್ಷ್ಮೀಪುರದಲ್ಲಿ ತನ್ನ 12 ಎಕರೆ ಜಮೀನಿನಲ್ಲಿ ಯುವ ರೈತ ರಾಜೇಂದ್ರ ಟೊಮೆಟೋ ಬೆಳೆದಿದ್ದಾರೆ. ಆರು ತಿಂಗಳಲ್ಲಿ ಫಸಲು ಬಂದು, ಈಗ ಟೊಮೆಟೋ ದರ ಏರಿಕೆಯಾಗಿದ್ದು, ಬಂಗಾರದ ಬೆಲೆಗೆ ಮಾರಾಟ ಮಾಡಿ ಕೋಟ್ಯಾಧಿಪತಿಯಾಗಿದ್ದಾರೆ.

ಟೊಮೆಟೋ ಬೆಳೆ ಕೈ ಹಿಡಿದ ಪರಿಣಾಮ ಹೊಸ ಮಹೇಂದ್ರ XUV 700 ಕಾರು ಖರೀದಿಸಿ ಅದರಲ್ಲೇ ಕನ್ಯೆ ನೋಡಲು ಹೋಗುತ್ತೇನೆಂದು ಯುವ ಕೃಷಿಕ ರಾಜೇಂದ್ರ ಹೇಳುತ್ತಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಿಶ್ವದ ಶ್ರೀಮಂತ ಮಹಿಳೆಯನ್ನು ಭೇಟಿ ಮಾಡಿ, ಇವರು ಭಾರತೀಯರಲ್ಲ, ಮಸ್ಕ್ ಗೆ ಯಾವುದೇ ಹೊಂದಾಣಿಕೆ ಇಲ್ಲ, ಮುಕೆಶ್ ಅಂಬಾನಿ, ರತನ್ ಟಾಟಾ, ಅದಾನಿ, ನಿವ್ವಳ ಮೌಲ್ಯ..!

ತೋಟಗಾರಿಕಾ ಇಲಾಖೆಯಲ್ಲಿ 4319 ಬ್ರಹತ್ ನೇಮಕಾತಿ 2023. KSHD Recruitment 2023

ಅಯೋಧ್ಯೆಯ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ! ಆಲಿಗಢ ವ್ಯಕ್ತಿಯಿಂದ 400 ಕೆಜಿ ಭಾರದ ಬೀಗ ತಯಾರಿ !