ಅಂಚೆ ಇಲಾಖೆಯಲ್ಲಿ ಡ್ರೈವರ್‌ಗಳ ನೇಮಕ. ವೇತನ ರೂ. 19900-63200!

 

Karnataka postal circle driver recruitment


ಅಂಚೆ ಇಲಾಖೆ (India Post Office) ಸಂವಹನ ಸಚಿವಾಲಯ ಅಂಚೆ ಸೇವೆಯ ವ್ಯವಸ್ಥಾಪಕರ ಕಚೇರಿಯಲ್ಲಿ ಖಾಲಿ ಇರುವ 28 ಚಾಲಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.


ಹುದ್ದೆಗಳ ವಿವರ: 

ಚಿಕ್ಕೋಡಿ, ಕಲಬುರ್ಗಿ, ಧಾರವಾಡ, ಗದಗ, ಕಾರವಾರ, ಮಂಡ್ಯ, ಪುತ್ತೂರು, ಶಿವಮೊಗ್ಗ, ಉಡುಪಿ, ಕೋಲಾರ ತಲಾ ಒಂದೊಂದು ಹುದ್ದೆ ಮೈಸೂರು 3, ಎಂಎಂಎಸ್ ಬೆಂಗಳೂರಿನಲ್ಲಿ 15 ಹುದ್ದ ಸೇರಿದಂತೆ ಒಟ್ಟು 28 ಹುದ್ದೆಗಳಿಗೆ ನೇಮಕ ನಡೆಯಲಿದೆ.


ಅರ್ಹತೆಗಳೇನಿರಬೇಕು?: ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಲೈಟ್ ಮತ್ತು ಹೆವಿ ಮೋಟಾರು ವಾಹನಗಳ ಚಾಲನಾ ಪರವಾನಗಿ ಹೊಂದಿರಬೇಕು. ಮೋಟಾರ್ ಮೆಕಾನಿಸಮ್ ಕುರಿತ ಜ್ಞಾನ ಇರಬೇಕು. ಕನಿಷ್ಠ ಮೂರು ವರ್ಷಗಳ ಕಾಲ ಲೈಟ್ ಮತ್ತು ಹೆವಿ ಮೋಟಾರು ವಾಹನ ಚಾಲನೆಯ ಅನುಭವ ಹೊಂದಿರಬೇಕು. ಹೋಂ ಗಾರ್ಡ್, ನಾಗರಿಕ ಸ್ವಯಂ ಸೇವಕರು, ಸಶಸ್ತ್ರ ಪಡೆ ಸಿಬ್ಬಂದಿಯಾಗಿದ್ದವರಿಗೆ ಆದ್ಯತೆ ನೀಡಲಾಗುತ್ತದೆ. 19900 - 63200 ರೂ. ಮಾಸಿಕ ವೇತನ ಇರಲಿದೆ. ವಯೋಮಿತಿ: ಗರಿಷ್ಠ ವಯೋಮಿತಿ 56 ವರ್ಷದೊಳಗಿರಬೇಕು.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅನುಭವ, ಸಂಬಂಧಪಟ್ಟ ಶೈಕ್ಷಣಿಕ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಬೇಕು. ವಿಳಾಸ: The Manager, Motor Service, Bengaluru-560001 ವಿವರಗಳಿಗಾಗಿ ಕೆಳಗಿನ ಲಿಂಕ್ ಗೆ ಭೇಟಿ ಮಾಡಿ.

www.indiapost.gov.in

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಿಶ್ವದ ಶ್ರೀಮಂತ ಮಹಿಳೆಯನ್ನು ಭೇಟಿ ಮಾಡಿ, ಇವರು ಭಾರತೀಯರಲ್ಲ, ಮಸ್ಕ್ ಗೆ ಯಾವುದೇ ಹೊಂದಾಣಿಕೆ ಇಲ್ಲ, ಮುಕೆಶ್ ಅಂಬಾನಿ, ರತನ್ ಟಾಟಾ, ಅದಾನಿ, ನಿವ್ವಳ ಮೌಲ್ಯ..!

ತೋಟಗಾರಿಕಾ ಇಲಾಖೆಯಲ್ಲಿ 4319 ಬ್ರಹತ್ ನೇಮಕಾತಿ 2023. KSHD Recruitment 2023

ಅಯೋಧ್ಯೆಯ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ! ಆಲಿಗಢ ವ್ಯಕ್ತಿಯಿಂದ 400 ಕೆಜಿ ಭಾರದ ಬೀಗ ತಯಾರಿ !