ತೋಟಗಾರಿಕಾ ಇಲಾಖೆಯಲ್ಲಿ 4319 ಬ್ರಹತ್ ನೇಮಕಾತಿ 2023. KSHD Recruitment 2023

 


ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆಯಲ್ಲಿ ( KSHD ) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ಇಲಾಖೆಯ ಹೆಸರು  : (KSHD) ಕರ್ನಾಟಕ ರಾಜ್ಯ 

                                 ತೋಟಗಾರಿಕಾ ಇಲಾಖೆ

ಹುದ್ದೆಯ ಹೆಸರು      : ವಿವಿಧ ಹುದ್ದೆಗಳು

ಒಟ್ಟೂ ಹುದ್ದೆಗಳು    : 4319

ಮನೆ ಕಟ್ಟಲು 5 ಲಕ್ಷ, ಹಳೆಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈಗಲೇ ಅರ್ಜಿ ಸಲ್ಲಿಸಿ.!

ಹುದ್ದೆಗಳ ವಿವರ       :

  • ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು :

        256 ಹುದ್ದೆಗಳು

        ಮಾಸಿಕ ವೇತನ: ರೂ. 52,650 ರೂ. 97,100

ಶೈಕ್ಷಣಿಕ ವಿದ್ಯಾರ್ಹತೆ:  ತೋಟಗಾರಿಕೆ ವಿಷಯದಲ್ಲಿ ಬಿ.ಎಸ್‌ಸಿ ಪದವಿ ಜೊತೆಗೆ ತೋಟಗಾರಿಕೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಸಹಾಯಕ ತೋಟಗಾರಿಕೆ ನಿರ್ದೇಶಕರು : 475
ಮಾಸಿಕ ವೇತನ : ರೂ. 43,100 - ರೂ. 83,900 ಶೈಕ್ಷಣಿಕ ವಿದ್ಯಾರ್ಹತೆ:ತೋಟಗಾರಿಕೆ ವಿಷಯದಲ್ಲಿ ಬಿ.ಎಸ್‌ಸಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಸಹಾಯಕ ತೋಟಗಾರಿಕೆ ಅಧಿಕಾರಿ : 1136
ಮಾಸಿಕ ವೇತನ  : ರೂ. 40,900 – ರೂ. 78,200 
ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ತೋಟಗಾರಿಕೆ ವಿಷಯದಲ್ಲಿ ಬಿ.ಎಸ್ಸಿ ಪದವಿ ಅರ್ಹತೆ ಹೊಂದಿರಬೇಕು.

    • ತೋಟಗಾರಿಕೆ ಸಹಾಯಕ : 926 
ಮಾಸಿಕ ವೇತನ : ರೂ. 23,500 - ರೂ. 47,650 ಶೈಕ್ಷಣಿಕ ವಿದ್ಯಾರ್ಹತೆ: ತೋಟಗಾರಿಕೆ ವಿಷಯದಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು.
  • ಪ್ರಥಮ ದರ್ಜೆ ಸಹಾಯಕರು : 311 ಹುದ್ದೆಗಳು
ಮಾಸಿಕ ವೇತನ : ರೂ. 27,650 - ರೂ. 52,650 ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

      • ಶೀಘ್ರಲಿಪಿಗಾರರು : 11 
ಮಾಸಿಕ ವೇತನ : ರೂ. 27,650 - ರೂ. 52,650 ಶೈಕ್ಷಣಿಕ ವಿದ್ಯಾರ್ಹತೆ: ಪಿ.ಯು.ಸಿ.ಯಲ್ಲಿ
ಉತ್ತೀರ್ಣರಾಗಿರಬೇಕು ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆ.ಎಸ್.ಇ.ಇ.ಬಿ ) ಯಿಂದ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಮತ್ತು ಹಿರಿಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕನ್ನಡ ಶೀಘ್ರಲಿಪಿಯಲ್ಲಿ ಐಚ್ಛಿಕದೊಂದಿಗೆ ಸೆಕ್ರೆಟೇರಿಯಲ್ ಪ್ರಾಕ್ಟಿಸ್ ಡಿಪ್ಲೋಮಾವನ್ನು ಪಡೆದಿರಬೇಕು.

  • ದ್ವಿತೀಯ ದರ್ಜೆ ಸಹಾಯಕರು : 271
ಮಾಸಿಕ ವೇತನ : ರೂ. 21,400 – ರೂ. 42,000 ಶೈಕ್ಷಣಿಕ ವಿದ್ಯಾರ್ಹತೆ: ದ್ವಿತೀಯ ಪಿಯುಸಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

  • ದತ್ತಾಂಶ ನಮೂದಕ ಸಹಾಯಕರು : 5
ಮಾಸಿಕ ವೇತನ : ರೂ. 21,400 – ರೂ. 42,000 ಶೈಕ್ಷಣಿಕ ವಿದ್ಯಾರ್ಹತೆ: ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆ.ಎಸ್.ಇ.ಇ.ಬಿ )ಯಿಂದ ನಡೆಸಲಾಗುವ ಕನ್ನಡ ಹಿರಿಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿತಕ್ಕದ್ದು ಅಥವಾ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲಾದ ಕಮರ್ಷಿಯಲ್ ಪ್ಯಾಕ್ಟಿಸ್ ಮತ್ತು ಕನ್ನಡ ಹಿರಿಯ ನಲ್ಲಿ ಡಿಪ್ಲೋಮಾವನ್ನು ಪಡೆದಿರತಕ್ಕದ್ದು.

  • ವಾಹನ ಚಾಲಕರು : 87  
ವೇತನ : ರೂ. 21,400 - ರೂ. 42,000 ಶೈಕ್ಷಣಿಕ ವಿದ್ಯಾರ್ಹತೆ: ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

  • ಲ್ಯಾಬ್ ಅಸಿಸ್ಟಂಟ್  : 13 ಹುದ್ದೆಗಳು
  • ಜೇನು ಕೃಷಿ ಸಹಾಯಕರು  : 20 ಹುದ್ದೆಗಳು
  • ಕಾವಲುಗಾರ : 29 ಹುದ್ದೆಗಳು 
ಮಾಸಿಕ ವೇತನ : ರೂ. 17,000 - ರೂ. 28,950
ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಜವಾನ : 98
ಮಾಸಿಕ ವೇತನ : ರೂ. 17,000 – ರೂ. 28,950 ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ/10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

  • ತೋಟಗಾರ : 1774
ಮಾಸಿಕ ವೇತನ : ರೂ. 17,000 – ರೂ. 28,950 ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರತಕ್ಕದ್ದು ಮತ್ತು ಕರ್ನಾಟಕ ತೋಟಗಾರಿಕೆ ಇಲಾಖೆಯಿಂದ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆದಿರುವ ಪ್ರಮಾಣ ಪತ್ರ ಹೊಂದಿರತಕ್ಕದ್ದು. ಅಥವಾ ಎಸ್.ಎಸ್.ಎಲ್.ಸಿ ಮತ್ತು ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ICAR) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಪಡೆದಿರಬೇಕು.

ಈ ಎಲ್ಲಾ ಹುದ್ದೆಗಳ ನೇಮಕಾತಿ ಅತೀ ಶೀಘ್ರದಲ್ಲೆ ಪ್ರಾರಂಭವಾಗುವುದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಿಶ್ವದ ಶ್ರೀಮಂತ ಮಹಿಳೆಯನ್ನು ಭೇಟಿ ಮಾಡಿ, ಇವರು ಭಾರತೀಯರಲ್ಲ, ಮಸ್ಕ್ ಗೆ ಯಾವುದೇ ಹೊಂದಾಣಿಕೆ ಇಲ್ಲ, ಮುಕೆಶ್ ಅಂಬಾನಿ, ರತನ್ ಟಾಟಾ, ಅದಾನಿ, ನಿವ್ವಳ ಮೌಲ್ಯ..!

ಅಯೋಧ್ಯೆಯ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ! ಆಲಿಗಢ ವ್ಯಕ್ತಿಯಿಂದ 400 ಕೆಜಿ ಭಾರದ ಬೀಗ ತಯಾರಿ !